Connect with us

ಮುಸ್ಲಿಂ ಬಾಂಧವರು ಹೆಚ್ಚಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು

ಯೇಸು ದೇವರೇ ಅಥವಾ ಕೇವಲ ಒಬ್ಬ ಪ್ರವಾದಿಯೇ?

ಯೇಸು ಒಬ್ಬ ಶ್ರೇಷ್ಠ ಪ್ರವಾದಿ ಮಾತ್ರವಲ್ಲ, ಆತನು ಮನುಷ್ಯನಾಗಿ ಬಂದ ದೇವರೇ ಆಗಿದ್ದಾರೆ. ಸತ್ಯವೇದವು ಹೀಗೆ ಹೇಳುತ್ತದೆ: “ಆ ವಾಕ್ಯವು ಮನುಷ್ಯರೂಪಧರಿಸಿಕೊಂಡು ನಮ್ಮ ಮಧ್ಯದಲ್ಲಿ ವಾಸಿಸಿತು” (ಯೋಹಾನ 1:14).

ಯೇಸು ತಾನು ದೇವರೆಂದು ಎಲ್ಲಾದರೂ ಹೇಳಿಕೊಂಡಿದ್ದಾರೆಯೇ?

ಹೌದು. ಯೇಸು, “ನಾನೂ ತಂದೆಯೂ ಒಂದೇ ಆಗಿದ್ದೇವೆ” ಎಂದು ಹೇಳಿದರು (ಯೋಹಾನ 10:30). ಅಂದರೆ ತಾನು ದೇವರೊಂದಿಗೆ ಸಮಾನ ಎಂದು ಆತನು ತೋರಿಸಿಕೊಟ್ಟನು.

ಯೇಸು ನಿಜವಾಗಿಯೂ ಶಿಲುಬೆಯ ಮೇಲೆ ಸತ್ತರೇ?

ಹೌದು, ಯೇಸು ನಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ಪ್ರಾಣ ಕೊಟ್ಟರು ಎಂದು ಸತ್ಯವೇದವು ಬಹಳ ಸ್ಪಷ್ಟವಾಗಿ ಹೇಳುತ್ತದೆ. ಯೇಸು ಶಿಲುಬೆಯ ಮೇಲೆ ಸಾಯುವಾಗ, “ಎಲ್ಲವೂ ತೀರಿತು” ಎಂದು ಹೇಳಿ ಪ್ರಾಣಬಿಟ್ಟರು (ಯೋಹಾನ 19:30).

ಮುಹಮ್ಮದ್ ಅವರ ಬಗ್ಗೆ ಸತ್ಯವೇದವು ಏನು ಹೇಳುತ್ತದೆ?

ಸತ್ಯವೇದದಲ್ಲಿ ಮುಹಮ್ಮದ್ ಅವರ ಹೆಸರನ್ನು ನೇರವಾಗಿ ಎಲ್ಲಿಯೂ ಹೇಳಲಾಗಿಲ್ಲ.

ಕ್ರೈಸ್ತರು ದೇವರನ್ನು “ತಂದೆಯೇ” ಎಂದು ಏಕೆ ಕರೆಯುತ್ತಾರೆ?

ಏಕೆಂದರೆ ದೇವರು ನಮ್ಮನ್ನು ಸೃಷ್ಟಿಸಿದವರೂ ಮತ್ತು ಪ್ರೀತಿಸುವವರೂ ಆಗಿದ್ದಾರೆ. ಯೇಸುವಿನ ಮೂಲಕ ನಾವು ದೇವರ ಮಕ್ಕಳಾಗಿದ್ದೇವೆ. ಅದಕ್ಕೇ ಯೇಸು ನಮಗೆ ಪ್ರಾರ್ಥನೆ ಮಾಡುವಾಗ “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂದು ಕರೆಯಲು ಕಲಿಸಿಕೊಟ್ಟರು (ಮತ್ತಾಯ 6:9).

ಸತ್ಯವೇದವು (ಬೈಬಲ್) ಮಾರ್ಪಾಡು ಹೊಂದಿದೆಯೇ ಅಥವಾ ಕೆಟ್ಟುಹೋಗಿದೆಯೇ?

ಇಲ್ಲ, ದೇವರ ವಾಕ್ಯವು ಎಂದಿಗೂ ಬದಲಾಗುವುದಿಲ್ಲ. “ಹುಲ್ಲು ಒಣಗಿಹೋಗುತ್ತದೆ, ಹೂವು ಬಾಡಿಹೋಗುತ್ತದೆ; ಆದರೆ ನಮ್ಮ ದೇವರ ವಾಕ್ಯವು ಸದಾಕಾಲಕ್ಕೂ ಇರುವದು” (ಯೆಶಾಯ 40:8). ದೇವರು ತನ್ನ ವಾಕ್ಯವನ್ನು ಕಾಪಾಡಿಕೊಳ್ಳುವ ಶಕ್ತಿಯುಳ್ಳವರಾಗಿದ್ದಾರೆ.

ಯಾವುದು ಮೊದಲು ಬಂದಿದ್ದು – ಸತ್ಯವೇದವೋ ಅಥವಾ ಕುರಾನ್ ಪ್ರತಿಯೋ?

ಸತ್ಯವೇದವು ಮೊದಲು ಬಂದಿದ್ದು. ಕುರಾನ್ ಬರುವುದಕ್ಕೆ ಸುಮಾರು 500-600 ವರ್ಷಗಳ ಮೊದಲೇ ಸತ್ಯವೇದವು ಸಂಪೂರ್ಣವಾಗಿ ಬರೆಯಲ್ಪಟ್ಟಿತ್ತು.

ಇಂಜಿಲ್ ಮತ್ತು ಸತ್ಯವೇದ ಎರಡೂ ಒಂದೇನಾ?

‘ಇಂಜಿಲ್’ ಎಂದರೆ ಯೇಸುವಿನ ಶುಭಸಮಾಚಾರ ಅಥವಾ ಸುವಾರ್ತೆ (Gospel) ಎಂದರ್ಥ. ಇದು ಸತ್ಯವೇದದ ಹೊಸ ಒಡಂಬಡಿಕೆಯಲ್ಲಿರುವ ಪ್ರಮುಖ ಭಾಗವಾಗಿದೆ.

ಸತ್ಯವೇದದಲ್ಲಿ ಇಷ್ಟೊಂದು ಆವೃತ್ತಿಗಳು (Versions) ಏಕೆ ಇವೆ?

ಸತ್ಯವೇದದ ಮೂಲ ಸಂದೇಶವು ಒಂದೇ. ಆದರೆ ಜನರು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಲು ಬೇರೆ ಬೇರೆ ಕನ್ನಡ ಅಥವಾ ಇಂಗ್ಲಿಷ್ ಶೈಲಿಗಳಲ್ಲಿ ಭಾಷಾಂತರ ಮಾಡಲಾಗಿದೆ ಅಷ್ಟೆ.

ತ್ರಯತ್ವ (Trinity) ಮತ್ತು ತೌಹಿದ್ (Tawhid) – ಇವುಗಳ ನಡುವಿನ ವ್ಯತ್ಯಾಸವೇನು?

‘ತೌಹಿದ್’ ಎಂದರೆ ದೇವರು ಒಬ್ಬನೇ ಎಂದು ನಂಬುವುದು. ‘ತ್ರಯತ್ವ’ ಎಂದರೆ ದೇವರು ಒಬ್ಬನೇ ಆದರೂ ಆತನು ತಂದೆ, ಮಗ ಮತ್ತು ಪವಿತ್ರಾತ್ಮ ಎಂಬ ಮೂರು ವ್ಯಕ್ತಿತ್ವಗಳಲ್ಲಿ ಇದ್ದಾರೆ ಎಂದು ನಂಬುವುದು. ಇದು ಒಬ್ಬನೇ ಸೂರ್ಯನು ಶಾಖ, ಬೆಳಕು ಮತ್ತು ಗೋಳವಾಗಿರುವಂತೆ..

ಶಿಕ್ಷೆ ಇಲ್ಲದೆಯೇ ದೇವರು ಪಾಪಗಳನ್ನು ಕ್ಷಮಿಸಲು ಹೇಗೆ ಸಾಧ್ಯ?

ದೇವರು ಪ್ರೀತಿ ಸ್ವರೂಪಿಯಾಗಿದ್ದರೂ ಆತನು ನ್ಯಾಯವಂತನಾಗಿದ್ದಾರೆ. ನಮ್ಮ ಪಾಪಕ್ಕೆ ಶಿಕ್ಷೆಯಾಗಲೇಬೇಕಿತ್ತು, ಅದಕ್ಕೇ ಯೇಸು ಆ ಶಿಕ್ಷೆಯನ್ನು ತನ್ನ ಮೇಲೆ ಹೊತ್ತುಕೊಂಡು ನಮಗೆ ಕ್ಷಮೆ ನೀಡಿದರು.

ಕ್ರೈಸ್ತ ಧರ್ಮದಲ್ಲಿ ಬಲಿಯ (Sacrifice) ಅರ್ಥವೇನು?

ಪಾಪದ ಫಲ ಸಾವು. ಹಳೆಯ ಕಾಲದಲ್ಲಿ ಪಾಪದ ಬದಲಾಗಿ ಕುರಿಗಳನ್ನು ಬಲಿ ಕೊಡುತ್ತಿದ್ದರು. ಆದರೆ ಯೇಸು ನಮ್ಮೆಲ್ಲರ ಪಾಪಗಳಿಗಾಗಿ ತನ್ನನ್ನೇ ಒಂದೇ ಸಾರಿ ಬಲಿಯಾಗಿ ಅರ್ಪಿಸಿಕೊಂಡರು (ಇಬ್ರಿಯ 9:22-26).

ಯೇಸು ಒಬ್ಬನೇ ಏಕೈಕ ಮಾರ್ಗ ಎಂದು ಕ್ರೈಸ್ತ ಧರ್ಮ ಏಕೆ ಹೇಳುತ್ತದೆ?

ಯೇಸು ಮಾತ್ರವೇ ಮನುಷ್ಯರ ಪಾಪಕ್ಕಾಗಿ ತನ್ನ ಪ್ರಾಣವನ್ನು ಕೊಟ್ಟ ಏಕೈಕ ರಕ್ಷಕನಾಗಿದ್ದಾರೆ. ಅದಕ್ಕೇ ಆತನು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಎಂದು ಹೇಳಿದರು (ಯೋಹಾನ 14:6).

ಪರಲೋಕದ (Heaven) ಬಗ್ಗೆ ಕ್ರೈಸ್ತರ ನೋಟವೇನು?

ಪರಲೋಕ ಎಂದರೆ ದೇವರ ಜೊತೆಯಲ್ಲಿ ವಾಸಿಸುವುದು. ಅಲ್ಲಿ ಸಾವು, ನೋವು, ಅಳು ಯಾವುದೂ ಇರುವುದಿಲ್ಲ. ಅದು ಕೇವಲ ಸುಖವಲ್ಲ, ದೇವರ ಪ್ರೀತಿಯಲ್ಲಿರುವ ಪರಮಾನಂದ (ಪ್ರಕಟನೆ 21:4).

ಕ್ರೈಸ್ತರು ಮತ್ತು ಮುಸ್ಲಿಮರು ಆರಾಧಿಸುವುದು ಒಬ್ಬನೇ ದೇವರನ್ನೇ?

ಇಬ್ಬರೂ ದೇವರು ಒಬ್ಬನೇ ಎಂದು ನಂಬುತ್ತಾರೆ ಮತ್ತು ಆತನೇ ವಿಶ್ವದ ಸೃಷ್ಟಿಕರ್ತ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ದೇವರು ಹೇಗಿದ್ದಾರೆ (ದೇವರ ಗುಣಗಳು ಮತ್ತು ಯೇಸುವಿನ ದೈವತ್ವ) ಎಂಬ ವಿಷಯದಲ್ಲಿ ನಮ್ಮ ತಿಳುವಳಿಕೆಗಳು ವಿಭಿನ್ನವಾಗಿವೆ.

Home » ಮುಸ್ಲಿಂ ಬಾಂಧವರು ಹೆಚ್ಚಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು

Copyright © 2026 KannadaGospel.com