Connect with us

ಹಿಂದೂ ಬಾಂಧವರು ಹೆಚ್ಚಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು

ಯೇಸು ಅನೇಕ ದೇವರುಗಳಲ್ಲಿ ಒಬ್ಬರೇ?

ಇಲ್ಲ. ಸತ್ಯವೇದವು ಯೇಸುವನ್ನು ಕೇವಲ ಒಬ್ಬ ದೇವರೆಂದು ಹೇಳದೆ, ಆತನೇ ಸೃಷ್ಟಿಕರ್ತನಾದ ದೇವರ ವಾಕ್ಯ ಅಥವಾ ದೇವಕುಮಾರ ಎಂದು ಹೇಳುತ್ತದೆ. “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” (ಯೋಹಾನ 14:6).

ಕ್ರೈಸ್ತ ಧರ್ಮವು ಒಬ್ಬನೇ ದೇವರು ಎಂದು ಏಕೆ ಹೇಳುತ್ತದೆ?

ಯಕೆಂದರೆ ಈ ಇಡೀ ವಿಶ್ವವನ್ನು ಸೃಷ್ಟಿಸಿದ್ದು ಒಬ್ಬನೇ ದೇವರು. “ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನು” (ಧರ್ಮೋಪದೇಶಕಾಂಡ 6:4). ಒಬ್ಬ ತಂದೆ ತನ್ನ ಮಕ್ಕಳಿಗೆ ಹೇಗೋ, ಹಾಗೆಯೇ ದೇವರು ಒಬ್ಬನೇ ಆಗಿದ್ದಾರೆ.

ಎಲ್ಲಾ ಧರ್ಮಗಳೂ ಮೂಲತಃ ಒಂದೇ ಆಗಿವೆಯೇ?

ಎಲ್ಲಾ ಧರ್ಮಗಳೂ ನಮಗೆ ‘ಒಳ್ಳೆಯವರಾಗಿರಿ’ ಎಂದು ಕಲಿಸುತ್ತವೆ ನಿಜ. ಆದರೆ ಕ್ರೈಸ್ತ ವಿಶ್ವಾಸವು ‘ನಾವು ಎಷ್ಟು ಒಳ್ಳೆಯವರಾದರೂ ದೇವರಿಗೆ ಸಮನಾಗಲು ಸಾಧ್ಯವಿಲ್ಲ, ಅದಕ್ಕೆ ದೇವರೇ ಮನುಷ್ಯನಾಗಿ ಬಂದು ನಮ್ಮನ್ನು ರಕ್ಷಿಸಬೇಕು’ ಎಂದು ಕಲಿಸುತ್ತದೆ.

ಇತರ ದೇವರುಗಳ ಜೊತೆಯಲ್ಲಿ ಯೇಸುವನ್ನೂ ಒಪ್ಪಿಕೊಳ್ಳಬಹುದೇ?

ಸತ್ಯವೇದದ ಪ್ರಕಾರ, ದೇವರು ನಮ್ಮ ಸಂಪೂರ್ಣ ಹೃದಯವನ್ನು ಬಯಸುತ್ತಾರೆ. “ನನ್ನ ಹೊರತಾಗಿ ನಿನಗೆ ಬೇರೆ ದೇವರುಗಳು ಇರಬಾರದು” (ವಿಮೋಚನಾಕಾಂಡ 20:3) ಎಂದು ದೇವರು ಆಜ್ಞಾಪಿಸಿದ್ದಾರೆ. ಯೇಸು ನಮಗೆ ಕೇವಲ ಒಬ್ಬ ದೇವರಲ್ಲ, ಆತನೇ ನಮ್ಮ ‘ಕರ್ತನು’.

ತ್ರಯತ್ವ (Trinity) ಮತ್ತು ತ್ರಿಮೂರ್ತಿ (Trimurti) – ಇವೆರಡೂ ಒಂದೇ ತರಹವೇ?

ಇಲ್ಲ, ಇವೆರಡಕ್ಕೂ ವ್ಯತ್ಯಾಸವಿದೆ. ತ್ರಿಮೂರ್ತಿಯಲ್ಲಿ ಮೂರು ಬೇರೆ ಬೇರೆ ದೇವರುಗಳು ಬೇರೆ ಬೇರೆ ಕೆಲಸ (ಸೃಷ್ಟಿ, ಸ್ಥಿತಿ, ಲಯ) ಮಾಡುತ್ತಾರೆ. ಆದರೆ ‘ತ್ರಯತ್ವ ಎಂದರೆ ಒಬ್ಬನೇ ದೇವರು ತಂದೆ, ಮಗ ಮತ್ತು ಪವಿತ್ರಾತ್ಮ ಎಂಬ ಮೂರು ವ್ಯಕ್ತಿತ್ವಗಳಲ್ಲಿ ಇದ್ದಾರೆ. ಅವರು ಯಾವಾಗಲೂ ಒಂದೇ ಆಗಿರುತ್ತಾರೆ.

ಕರ್ಮ ಮತ್ತು ಕೃಪೆಯ ನಡುವೆ ಇರುವ ವ್ಯತ್ಯಾಸವೇನು?

‘ಕರ್ಮ’ ಎಂದರೆ ನಾವು ಮಾಡುವ ಕೆಲಸಕ್ಕೆ ತಕ್ಕ ಫಲ ಸಿಗುವುದು (ನಾವು ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು). ಆದರೆ ‘ಕೃಪೆ’ ಎಂದರೆ ನಾವು ಶಿಕ್ಷೆಗೆ ಅರ್ಹರಾಗಿದ್ದರೂ, ದೇವರು ತಮ್ಮ ಪ್ರೀತಿಯಿಂದ ನಮ್ಮನ್ನು ಕ್ಷಮಿಸಿ ರಕ್ಷಿಸುವುದು.

ಸತ್ಯವೇದವು (ಬೈಬಲ್) ಪುನರ್ಜನ್ಮದ ಬಗ್ಗೆ ಬೋಧಿಸುತ್ತದೆಯೇ?

ಇಲ್ಲ. ಮನುಷ್ಯನು ಭೂಮಿಯ ಮೇಲೆ ಒಂದು ಸಲಿ ಮಾತ್ರ ಹುಟ್ಟುತ್ತಾನೆ ಎಂದು ಸತ್ಯವೇದ ಹೇಳುತ್ತದೆ.

ಕ್ರೈಸ್ತ ಧರ್ಮವು ಪುನರ್ಜನ್ಮವನ್ನು ಏಕೆ ಒಪ್ಪುವುದಿಲ್ಲ?

ಯಕೆಂದರೆ ಸತ್ಯವೇದವು ಹೀಗೆ ಹೇಳುತ್ತದೆ: “ಮನುಷ್ಯರು ಒಂದೇ ಸಾರಿ ಸಾಯಬೇಕೆಂದೂ ಆ ಮೇಲೆ ನ್ಯಾಯತೀರ್ಪು ಉಂಟಾಗಬೇಕೆಂದೂ ನೇಮಕವಾಗಿದೆ” (ಇಬ್ರಿಯ 9:27). ನಮಗೆ ಸಿಗುವುದು ಹೊಸ ಜನ್ಮವಲ್ಲ, ದೇವರೊಂದಿಗೆ ಇರುವ ‘ನಿತ್ಯಜೀವ’.

ರಕ್ಷಣೆಯು ನಾವು ಕಷ್ಟಪಟ್ಟು ಸಂಪಾದಿಸಬೇಕಾದದ್ದೇ ಅಥವಾ ನಮಗೆ ಉಚಿತವಾಗಿ ಸಿಗುವ ಉಡುಗೊರೆಯೇ?

ರಕ್ಷಣೆಯು ದೇವರ ಉಚಿತವಾದ ಕೊಡುಗೆ. “ಯಾರೂ ಹೆಚ್ಚಳಪಡದಂತೆ ಅದು ಕ್ರಿಯೆಗಳಿಂದ ಉಂಟಾದದ್ದಲ್ಲ” (ಎಫೆಸ 2:9). ನಾವು ಒಳ್ಳೆಯ ಕೆಲಸ ಮಾಡುವುದರಿಂದ ರಕ್ಷಣೆ ಸಿಗುವುದಿಲ್ಲ, ಬದಲಾಗಿ ರಕ್ಷಣೆ ಸಿಕ್ಕಿರುವುದರಿಂದ ನಾವು ಒಳ್ಳೆಯ ಕೆಲಸ ಮಾಡುತ್ತೇವೆ.

ಮೋಕ್ಷ ಮತ್ತು ರಕ್ಷಣೆ (Salvation) – ಇವೆರಡರ ನಡುವಿನ ವ್ಯತ್ಯಾಸವೇನು?

‘ಮೋಕ್ಷ’ ಎಂದರೆ ಹುಟ್ಟು-ಸಾವಿನ ಚಕ್ರದಿಂದ ಬಿಡುಗಡೆ ಹೊಂದುವುದು. ‘ರಕ್ಷಣೆ’ ಎಂದರೆ ಪಾಪದಿಂದ ಬಿಡುಗಡೆ ಹೊಂದಿ, ದೇವರನ್ನು ತಂದೆಯಾಗಿ ಕಂಡು, ಅವರ ಜೊತೆ ಸದಾಕಾಲ ಪ್ರೀತಿಯಿಂದ ಜೀವಿಸುವುದು.

ಕ್ರೈಸ್ತ ಧರ್ಮವು ಭಾರತಕ್ಕೆ ಹೊರಗಿನಿಂದ ಬಂದ ಧರ್ಮವೇ?

ಇಲ್ಲ, ಇದು ಜಾಗತಿಕ ಧರ್ಮ. ಯೇಸುವಿನ ಶಿಷ್ಯನಾದ ಸಂತ ತೋಮಸನು (St. Thomas) ಕ್ರಿ.ಶ. 52ರಲ್ಲಿಯೇ ಭಾರತಕ್ಕೆ ಬಂದಿದ್ದರು. ಅಂದರೆ ಇದು ಇಲ್ಲಿನ ಮಣ್ಣಿನ ಹಳೆಯ ಇತಿಹಾಸದ ಭಾಗವಾಗಿದೆ.

ಕ್ರೈಸ್ತ ಧರ್ಮವು ಬ್ರಿಟಿಷರ ಜೊತೆಯಲ್ಲೇ ಭಾರತಕ್ಕೆ ಬಂದಿದ್ದೇ?

ಇಲ್ಲ, ಇದು ಜಾಗತಿಕ ಧರ್ಮ. ಯೇಸುವಿನ ಶಿಷ್ಯನಾದ ಸಂತ ತೋಮಸನು (St. Thomas) ಕ್ರಿ.ಶ. 52ರಲ್ಲಿಯೇ ಭಾರತಕ್ಕೆ ಬಂದಿದ್ದರು. ಅಂದರೆ ಇದು ಇಲ್ಲಿನ ಮಣ್ಣಿನ ಹಳೆಯ ಇತಿಹಾಸದ ಭಾಗವಾಗಿದೆ.

ಯೇಸು ಯಾವಾಗಲಾದರೂ ಭಾರತಕ್ಕೆ ಬಂದಿದ್ದರೇ?

ಇದಕ್ಕೆ ಸತ್ಯವೇದದಲ್ಲಾಗಲಿ ಅಥವಾ ಇತಿಹಾಸದಲ್ಲಾಗಲಿ ಯಾವುದೇ ಪುರಾವೆಗಳಿಲ್ಲ. ಯೇಸು ಇಡೀ ಜಗತ್ತಿನ ರಕ್ಷಕನಾಗಿದ್ದಾರೆ.

ನನ್ನ ಸಂಸ್ಕೃತಿಯನ್ನು ಬಿಡದೆಯೇ ನಾನು ಯೇಸುವನ್ನು ಹಿಂಬಾಲಿಸಬಹುದೇ?

ಖಂಡಿತವಾಗಿಯೂ! ನೀವು ನಿಮ್ಮ ಭಾಷೆ, ಆಹಾರ, ಉಡುಗೆ-ತೊಡುಗೆ ಮತ್ತು ಒಳ್ಳೆಯ ಸಂಪ್ರದಾಯಗಳನ್ನು ಮುಂದುವರಿಸಬಹುದು. ಯೇಸು ನಮ್ಮ ಹೃದಯವನ್ನು ಕೇಳುತ್ತಾರೆಯೇ ಹೊರತು ನಮ್ಮ ಸಂಸ್ಕೃತಿಯನ್ನಲ್ಲ.

ಕ್ರೈಸ್ತರು ವಿಗ್ರಹಗಳನ್ನು ಏಕೆ ಆರಾಧಿಸುವುದಿಲ್ಲ?

ಯಕೆಂದರೆ ದೇವರು ಆತ್ಮನಾಗಿದ್ದಾರೆ ಮತ್ತು ಅದೃಶ್ಯರಾಗಿದ್ದಾರೆ. “ಯಾವ ವಿಗ್ರಹವನ್ನೂ ಮಾಡಿಕೊಳ್ಳಬೇಡ; ಅವುಗಳಿಗೆ ಅಡ್ಡಬೀಳಬೇಡ” (ವಿಮೋಚನಾಕಾಂಡ 20:4-5) ಎಂದು ದೇವರು ಹೇಳಿದ್ದಾರೆ. ದೇವರನ್ನು ನಾವು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸಬೇಕೆಂದು ಯೇಸು ಕಲಿಸಿದರು.

Home » ಹಿಂದೂ ಬಾಂಧವರು ಹೆಚ್ಚಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು

Copyright © 2026 KannadaGospel.com